Sunday, April 19, 2009

ಯಕ್ಷಮಿತ್ರ-ಟೊರೊಂಟೊದ ಯುಗಾದಿ ಕಾರ್ಯಕ್ರಮದ ವರದಿ


೧೧-ಏಪ್ರಿಲ್-೨೦೦೯ ರಂದು ಕನ್ನಡ ಸಂಘ ಟೊರೊಂಟೊದ ಆಶ್ರಯದಲ್ಲಿ ಯಕ್ಷಮಿತ್ರ-ಟೊರೊಂಟೊ ವೃಂದದವರಿಂದ ಯಕ್ಷಗಾನ "ಶ್ಯಮಂತಕೋಪಾಖ್ಯಾನ" ಯಕ್ಷಗಾನ ಪ್ರಸಂಗವು ಯಶಸ್ವಿಯಾಗಿ ಪ್ರದರ್ಶಿತವಾಯಿತು. ಸುಮಾರು ೫೫೦ ಕನ್ನಡಿಗರು ಯಕ್ಷಗಾನದ ಎಲ್ಲಾ ವಿಭಾಗಗಳ ಪ್ರದರ್ಶನವನ್ನು ಆಸಕ್ತಿಯಿಂದ ವೀಕ್ಷಿಸಿದರು. ಹಿಮ್ಮೇಳ ಮತ್ತು ಮುಮ್ಮೇಳ, ಎರಡರಲ್ಲೂ ಸ್ಥಳೀಯ ಕಲಾವಿದರೇ ಭಾಗವಹಿಸಿದ್ದು ಕಾರ್ಯಕ್ರಮದ ವಿಶೇಷ. ಕಾರ್ಯಕ್ರಮದ ಕೆಲವು ಫೋಟೋಗಳು ಮತ್ತು ವೀಡಿಯೋವನ್ನು ಕೆಳಗೆ kodalaagide.